ಕಲಬುರಗಿ: ರಾಜ್ಯದಲ್ಲಿ ಸೆಪ್ಟೆಂಬರ್ 22 ರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆರಂಭಿಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿ ಗಣತಿ)ಯು ಆರಂಭದಲ್ಲಿಯೇ ಹಿನ್ನಡೆ ಅನುಭವಿಸಿದೆ. ಸಮೀಕ್ಷೆಯು ಇಲ್ಲಿಯವರೆಗೂ ಕೇವಲ ಮೆರವಣಿಗೆಯ ಹಂತದಲ್ಲಷ್ಟೇ ನಡೆದಿದ್ದು, ತಾಂತ್ರಿಕ ಮತ್ತು ಸರ್ವರ್ ಸಮಸ್ಯೆಗಳಿಂದಾಗಿ ಸಮೀಕ್ಷೆ ಮಾಡಲು ಶಿಕ್ಷಕರು ತೀವ್ರವಾಗಿ ಪರದಾಡುತ್ತಿದ್ದಾರೆ.
ಶಿಕ್ಷಕರ ಆಕ್ರೋಶ ಮತ್ತು ಒತ್ತಾಯ
ಕಲಬುರಗಿಯಲ್ಲಿ ನೂರಾರು ಶಿಕ್ಷಕರು ಸಮೀಕ್ಷೆಯನ್ನು ತಕ್ಷಣವೇ ಮುಂದೂಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಸಮೀಕ್ಷಾ ಕಾರ್ಯ ಬಿಟ್ಟು ತಾಲ್ಲೂಕು ಕಚೇರಿಗೆ ಬಂದಿರುವ ಶಿಕ್ಷಕರು, ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಮೊಬೈಲ್ ಆ್ಯಪ್‌ನಲ್ಲಿ (Mobile App) ಬಹಳಷ್ಟು ಸಮಸ್ಯೆಗಳಿವೆ. ತಾಂತ್ರಿಕ ದೋಷದಿಂದಾಗಿ ಸಮೀಕ್ಷೆ (Survey) ಪೂರ್ಣಗೊಳ್ಳುತ್ತಿಲ್ಲ. ನಾವು ಪ್ರತಿದಿನ 80 ರಿಂದ 90 ಕಿಲೋಮೀಟರ್ ದೂರದಿಂದ ಬರುತ್ತೇವೆ. ದಿನವಿಡೀ ಪ್ರಯತ್ನಿಸಿದರೂ ಒಂದೇ ಒಂದು ಸಮೀಕ್ಷೆಯೂ ಪೂರ್ಣಗೊಳ್ಳುತ್ತಿಲ್ಲ. ಸಮೀಕ್ಷೆ ನಡೆಸಲು ನಮಗೆ ಸೂಕ್ತ ತರಬೇತಿಯನ್ನೂ ನೀಡಿಲ್ಲ. ಗಣತಿ ಮಾಡದಿದ್ದರೆ ಅಮಾನತು (Suspend) ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಹೀಗಾದರೆ ನಾವು ಕೆಲಸ ಮಾಡುವುದು ಹೇಗೆ?" ಎಂದು ಶಿಕ್ಷಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರು ಎದುರಿಸುತ್ತಿರುವ ತೀವ್ರ ಸಮಸ್ಯೆಗಳನ್ನು ಪರಿಗಣಿಸಿ, ಸರ್ಕಾರವು ಸಮೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಬೇಕು ಎಂದು ಕಲಬುರಗಿಯ ಶಿಕ್ಷಕರು ಒತ್ತಾಯಿಸಿದ್ದಾರೆ.
Tags
News
