ಭಾನುವಾರ ಲಂಡನ್‌ನ ಸೌತೆಂಡ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಬೀಚ್ B200 ಮಾದರಿಯ ಸಣ್ಣ ಪ್ರಯಾಣಿಕ ವಿಮಾನವೊಂದು ಅಪಘಾತಕ್ಕೀಡಾಗಿ, ಆಕಾಶಕ್ಕೆ ಬೆಂಕಿಯ ಉಂಡೆ ಎಸೆದ ಘಟನೆ ವರದಿಯಾಗಿದೆ. ವಿಮಾನವು ನೆದರ್‌ಲ್ಯಾಂಡ್ಸ್‌ನ ಲೆಲಿಸ್ಟಾಡ್‌ಗೆ ಹೊರಟಿತ್ತು ಎನ್ನಲಾಗಿದೆ. ತುರ್ತು ಸೇವೆಗಳು ಸ್ಥಳದಲ್ಲಿದ್ದು, ಸಮೀಪದ ರೋಚ್‌ಫೋರ್ಡ್ ಗಾಲ್ಫ್ ಕ್ಲಬ್ ಮತ್ತು ವೆಸ್ಟ್‌ಕ್ಲಿಫ್ ರಗ್ಬಿ ಕ್ಲಬ್ ಸ್ಥಳಾಂತರಿಸಲಾಗಿದೆ. ಈ ಘಟನೆಯಿಂದ ನಾಲ್ಕು ವಿಮಾನಗಳ ಟೇಕ್‌ಆಫ್ ರದ್ದಾಗಿದೆ.
Tags
News