ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರ ಪಾಕ್ ಧ್ವಜದ ಮಾದರಿಯ ಟೀ ಶರ್ಟ್ ಧರಿಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಈ ವಾಹನದ ನೋಂದಣಿ ಸಂಖ್ಯೆ ಕೆಎ 41 ಇ ಝಡ್ 6614 ಎಂದು ಗುರುತಿಸಲಾಗಿದೆ. ಟೀ ಶರ್ಟ್ ಮೇಲೆ ಭಾರತದ ಭೂಭಾಗವಾದ ಕಾಶ್ಮೀರ ರಾಜ್ಯವನ್ನು ಪಾಕ್ ಧ್ವಜದೊಂದಿಗೆ ಹೋಲುವಂತೆ ವಿನ್ಯಾಸಗೊಳಿಸಲಾಗಿದೆ ಎನ್ನಲಾಗಿದೆ.
ಶಾಸಕ ಯತ್ನಾಳ್ ಆಕ್ರೋಶ
ಈ ವಿಡಿಯೋ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು, ಇದು ರಾಷ್ಟ್ರೀಯ ಭದ್ರತೆ ಮತ್ತು ಗೌರವಕ್ಕೆ ಧಕ್ಕೆ ತರುವ ಕೃತ್ಯ ಎಂದು ಹೇಳಿದ್ದಾರೆ.
"ಶತ್ರು ರಾಷ್ಟ್ರವನ್ನು ಭಾರತೀಯ ಪ್ರಜೆ ಹೊಗಳುವುದು ನಮ್ಮ ರಾಷ್ಟ್ರಕ್ಕೆ ಮಾಡುವ ನೇರ ಅವಮಾನ. ಈ ವ್ಯಕ್ತಿ ಕಾಶ್ಮೀರ ಮತ್ತು ಪಾಕಿಸ್ತಾನದ ಧ್ವಜವನ್ನು ಹೊತ್ತ ಟೀ-ಶರ್ಟ್ ಧರಿಸಿರುವುದು ಅತ್ಯಂತ ಸ್ವೀಕಾರಾರ್ಹವಲ್ಲ ಮತ್ತು ಇದು ವಿಶ್ವಾಸಘಾತುಕ ಕೃತ್ಯವಾಗಿದೆ. ಅಂತಹ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಮತ್ತು ಸಂಬಂಧಿತ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು" ಎಂದು ಅವರು ಪೊಲೀಸರನ್ನು ಒತ್ತಾಯಿಸಿದ್ದಾರೆ.
ಈ ಘಟನೆಯು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ದೇಶಪ್ರೇಮ ಮತ್ತು ಕಾನೂನು ಕ್ರಮದ ಬಗ್ಗೆ ಒತ್ತಾಯಗಳು ಕೇಳಿಬರುತ್ತಿವೆ.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ👇
