ಉಡ್ತಾ ಪಂಜಾಬ್ ಆಗುತ್ತಿದೆಯೇ ಕರುನಾಡು?

ಬೆಂಗಳೂರು: ಗಾಂಜಾ, ಅಫೀಮು ಮುಖ್ಯವಾಗಿ ಸಿಂಥೇಟಿಕ್ ಡ್ರಗ್ ಎಗ್ಗಿಲ್ಲದೇ ಮಾರಾಟವಾಗುತ್ತಿರುವುದು ಅದರಲ್ಲೂ ವಿದೇಶಿ ನಟೋರಿಯಸ್‌ಗಳೇ ಈ ಜಾಲದ ಕಿಂಗ್ ಪಿನ್‌ಗಳಂತಾಗಿರುವುದು ದೊಡ್ಡ ಆತಂಕಕ್ಕೆ ಕಾರಣವಾಗಿದೆ.

ಕಳೆದ ಮೂರು ವರ್ಷಗಳ ಅವಧಿಯಲ್ಲಿ 14,485 ಪ್ರಕರಣಗಳು ದಾಖಲಾಗಿವೆ, 2023 ರಲ್ಲಿ 6,767 ಪ್ರಕರಣ ದಾಖಲಾಗಿದ್ದು ಆ ಪೈಕಿ 3,275 ಪ್ರಕರಣಗಳಿಗೆ ಶಿಕ್ಷೆಯಾಗಿದೆ. 2024 ರಲ್ಲಿ 4,188 ಪ್ರಕರಣಗಳು ದಾಖಲಾಗಿ 1577 ಪ್ರಕರಣಗಳಿಗೆ ಶಿಕ್ಷೆಯಾಗಿದ್ದು ಪ್ರಸಕ್ತ ವರ್ಷದ ಜುಲೈ ಮಾಸಾಂತ್ಯಕ್ಕೆ 3,530 ಪ್ರಕರಣಗಳು ದಾಖಲಾಗಿವೆ ಎಂಬುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಈ ಎಲ್ಲ ಜಾಲದ ಹಿಂದೆ ಇರುವ 300 ಕ್ಕೂ ಹೆಚ್ಚು ವಿದೇಶಿಗರನ್ನು ಬಂಧಿಸಿರುವುದು ಸಹ ಈ ಜಾಲ ಎಷ್ಟೊಂದು ವ್ಯಾಪಕವಾಗಿ ಆಪರೇಟ್ ಆಗುತ್ತಿದೆ ಎಂಬುದು ಆತಂಕ ಮೂಡಿಸಿದೆ.

ಕೋರಿಯರ್ ಮೂಲಕವೂ ಮಾದಕ ವಸ್ತುಗಳು ಪೂರೈಕೆಯಾಗುತ್ತಿವೆ ಎಂಬ ಗಂಭೀರ ಸ್ವರೂಪದ ಆರೋಪಗಳು ಶಾಸನ ಸಭೆಯಲ್ಲಿಯೂ ಕೇಳಿ ಬಂದಿದ್ದವು.

ಆ್ಯಕ್ಟಿವ್ ಆಗಬೇಕಿದೆ ಆ್ಯಂಟಿ ಡ್ರಗ್ಸ್ ಸ್ಕಾಡ್

ಈ ರೀತಿಯ ಪ್ರಕರಣಗಳು ಬೇಧಿಸಲು ಸರ್ಕಾರ ಆ್ಯಂಟಿ ಡ್ರಗ್ಸ್ ಸ್ಕಾಡ್ ರಚನೆ ಮಾಡಿದೆ, ಈ ಸ್ಕ್ವಾಡ್ ಇನ್ನೂ ಆ್ಯಕ್ಟೀವ್ ಆಗಬೇಕಿದೆ. ಎಗ್ಗಿಲ್ಲದೇ ಸಿಗುವ ಸಿಂಥೇಟಿಕ್ ಡ್ರಗ್ಸ್, ಗಾಂಜಾ ಮೊದಲಾದ ಮಾದಕ ದ್ರವ್ಯಗಳ ಜಾಲವನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಹೆಜ್ಜೆ ಇರಿಸಬೇಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು