ಲವ್ ಬ್ರೇಕಪ್‌: ಪ್ರೇಮಿಯನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ

ಹಾಸನ: ಪ್ರೇಮ ಸಂಬಂಧ (Love Breakup) ವಿಚಾರಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯಲ್ಲಿ ಭೀಕರ ಕೊಲೆ ನಡೆದಿದೆ. ಲವ್ ಬ್ರೇಕಪ್‌ನ ಹಿನ್ನೆಲೆಯಲ್ಲಿ ಪ್ರೇಮಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.

ಕೊಲೆಯಾದ ಯುವಕನನ್ನು ಹೊಳೆನರಸೀಪುರ ನಿವಾಸಿ ಸಂದೀಪ್ (24) ಎಂದು ಗುರುತಿಸಲಾಗಿದೆ. ಸಂದೀಪ್ ಅವರ ಮೃತದೇಹವು ಹೊಳೆನರಸೀಪುರ ತಾಲೂಕಿನ ಎಸ್. ಅಂಕನಹಳ್ಳಿ ಬಳಿ ಪತ್ತೆಯಾಗಿದೆ.

ಸಂದೀಪ್ ಕಳೆದ ಮೂರು ವರ್ಷಗಳಿಂದ ಮೈಸೂರು ಜಿಲ್ಲೆಯ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಇತ್ತೀಚೆಗೆ ಈ ಪ್ರೇಮ ಸಂಬಂಧ ಮುರಿದುಬಿದ್ದಿತ್ತು (ಲವ್ ಬ್ರೇಕಪ್). ಈ ಹಿನ್ನೆಲೆಯಲ್ಲಿ ಹುಡುಗಿ ಕಡೆಯವರಿಂದಲೇ ಸಂದೀಪ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಬಲವಾದ ಆರೋಪ ಕೇಳಿಬಂದಿದೆ.

ಅಪಘಾತದಂತೆ ಬಿಂಬಿಸಲು ಯತ್ನ

ಸಂದೀಪ್ ಅವರು ನಿನ್ನೆ ರಾತ್ರಿ ಮನೆಯಿಂದ ಬೈಕ್‌ನಲ್ಲಿ ತೆರಳಿದ್ದರು. ಇಂದು ಅವರ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಸಂದೀಪ್ ಅವರನ್ನು ಕೊಲೆ ಮಾಡಿದ್ದಾರೆ. ಬಳಿಕ, ಕೊಲೆಯನ್ನು ಅಪಘಾತದ ರೀತಿ ಬಿಂಬಿಸಲು ಯತ್ನಿಸಿದ್ದು, ಶವ ಮತ್ತು ಬೈಕ್ ಅನ್ನು ಮುಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಈ ಘಟನೆ ಸಂಬಂಧ ಹಳ್ಳಿ ಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು