Karnataka Budget: ಜೇಬಿಗೆ ಮಲ್ಟಿಪ್ಲೆಕ್ಸ್ ದುಬಾರಿಯಲ್ಲ....!!

Multiplex

ಸುಖಾಸೀನ ಆಸೀನದಲ್ಲಿ ಕುಳಿತು, ಹವಾನಿಯಂತ್ರಿತ ಸೌಲಭ್ಯದೊಂದಿಗೆ ಸ್ನ್ಯಾಕ್ಸ್ ಸವಿಯುತ್ತಾ ಮಲ್ಟಿಪ್ಲೆಕ್ಸ್ ಸಿನೆಮಾ ವೀಕ್ಷಿಸುವುದು ಸಿನಿಪ್ರಿಯರ ಆಸೆ. ಆದರೆ ಜೇಬಿಗೆ ಮಾತ್ರ ಹೊರೆ ಎಂದು ಅನೇಕರು ಮಲ್ಟಿಪ್ಲೆಕ್ಸ್ ಹೋಗುವುದು ಅಪರೂಪ. ಆದರೆ ಈಗ ಸರ್ಕಾರ ಮಲ್ಟಿಪೆಕ್ಸ್ ಹಾಗೂ ಚಿತ್ರಮಂದಿರಗಳಿಗೆ ಏಕ ರೂಪದ ದರ ನಿಗದಿಗೊಳಿಸುವ ಮೂಲಕ ಮಲ್ಟಿಪ್ಲೆಕ್ಸ್ ಚಿತ್ರ ವೀಕ್ಷಣೆ ದಾರಿ ಸುಗಮಗೊಳಿಸಿ ಸಿನಿಪ್ರಿಯರಿಗೆ ಬಿಗ್ ಗಿಫ್ಟ್ ನೀಡಿದೆ. 

ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ಗಳಿಗೆ 200 ರೂ. ದರ ನಿಗದಿಗೊಳಿಸಿ ಸರ್ಕಾರ ನಿರ್ಧರಿಸಿದೆ. ಕೆಲವು ದಿನಗಳ ಹಿಂದಷ್ಟೇ  ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ನಡೆದ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಉದ್ಘಾಟನೆಗೆ, ಚಿತ್ರರಂಗದಿಂದ ಬೆರಳೆಣಿಯ ಕಲಾವಿದರು, ತಂತ್ರಜ್ಞರ ಆಗಮನವಾಗಿತ್ತು. ವೇದಿಕೆ ಮೇಲೆಯೇ ಈ ಬಗ್ಗೆ ಕೊಂಚ ಕಟುವಾಗಿಯೇ ಪ್ರತಿಕ್ರಿಯಿಸಿದ್ದ ಡಿ.ಕೆ. ಶಿವಕುಮಾರ್, `ಚಿತ್ರರಂಗದ ನಟ್ಟು ಬೋಲ್ಟು ಹೇಗೆ ಟೈಟ್ ಮಾಡಬೇಕು ಎಂಬುದು ನನಗೆ ಗೊತ್ತಿದೆ, ಎಂದಿದ್ದರು. ಅದರಂತೆ, ಕಲಾಪದಲ್ಲಿಯೂ ಗೃಹ ಸಚಿವ ಜಿ ಪರಮೇಶ್ವರ್ ಈ ಬಗ್ಗೆ ಪ್ರಸ್ತಾಪಿಸಿದ್ದರು. ಇದೀಗ ಬಜೆಟ್ನಲ್ಲಿಯೇ ಏಕರೂಪ ಟಿಕೆಟ್ ನೀತಿಯನ್ನು ಜಾರಿ ಮಾಡಲಾಗಿದೆ.

ಒಂದು ರೀತಿ ಟಿಕೇಟ್ ದರ ಏಕರೂಪಗೊಳಿಸುವ ಮೂಲಕ ಚಿತ್ರೋದ್ಯಮದ ನಟ್-ಬೋಲ್ಟ್ ಟೈಟ್ ಮಾಡಿದಂತಾಗಿದೆ ಎಂದು ಜನರು ಮಾತನಾಡಿಕೊಳ್ಳುವಂತಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನಟ್-ಬೋಲ್ಟ್ ಸ್ಟೇಟ್‌ಮೆಂಟ್ ಸಖತ್ ವೈರಲ್ ಕೂಡಾ ಆಗಿತ್ತು. ಈ ಮಾತು ತಮಾಷೆಯಾಗಿರದೇ ಕಾರ್ಯರೂಪಕ್ಕೂ ಬಂದಿರುವುದು ಸಿನಿಮಾ ವೀಕ್ಷಿಸುವವರಿಗೆ ಕೊಂಚ ಖುಷಿ ತರಿಸಿದೆ. 

ಈ ನಿರ್ಧಾರಕ್ಕೂ ಮುನ್ನ ಮಲ್ಟಿಪ್ಲೆಕ್ಸ್ಗಳು ಹಾಗೂ ಚಿತ್ರಮಂದಿರದ ದರಕ್ಕೆ ಹೋಲಿಕೆ ಮಾಡಿದರೆ ಅಜಗಜಾಂತರ ವ್ಯತ್ಯಾಸವಿತ್ತು. ಈ ವ್ಯತ್ಯಾಸಕ್ಕೆ ಈಗ ಬ್ರೇಕ್ ಬಿದ್ದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು