ವಾರಾಂತ್ಯದಲ್ಲಿ ವೀಕ್ಷಕರನ್ನು ರಂಜಿಸಲು ಹಾರರ್, ಕಾಮಿಡಿ, ಆಕ್ಷನ್, ಥ್ರಿಲ್ಲರ್ ಸೇರಿದಂತೆ ಒಟ್ಟು 24 ಸಿನಿಮಾ ಹಾಗು ವೆಬ್ ಸಿರೀಸ್ ಗಳು ವಿವಿಧ ಓಟಿಟಿ ಪ್ಲಾಟ್ಫಾರ್ಮ್ಸ್ ಗಳಲ್ಲಿ ತೆರೆಕಂಡಿವೆ. ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಜಿಯೋ ಹಾಟ್ಸ್ಟಾರ್ ಸ್ಟ್ರೀಮಿಂಗ್ ಸೈಟ್ ಗಳಲ್ಲಿ ವಿವಿಧ ಬಗೆಯ ಸ್ಟ್ರೀಮಿಂಗ್ ಕಂಟೆಂಟ್ ಗಳು ರಿಲೀಸ್ ಆಗಿವೆ. ಹಾಗಾದ್ರೆ ಯಾವ ಓಟಿಟಿ ಯಲ್ಲಿ ಯಾವೆಲ್ಲ ಸಿನಿಮಾ ಹಾಗು ವೆಬ್ ಸಿರೀಸ್ ಗಳು ಸ್ಟ್ರೀಮಿಂಗ್ ಆಗಲಿವೆ ಎಂಬುದರ ಪಟ್ಟಿ ಇಲ್ಲಿದೆ.
ನೆಟ್ ಫ್ಲಿಕ್ಸ್: ಇದೆ ಫೆಬ್ರವರಿ 27 ರಂದು ಇಂಗ್ಲಿಷ್ ಹಾರರ್ ಅಂಡ್ ಥ್ರಿಲ್ಲರ್ ಸಿನಿಮಾ ಫೈವ್ ನೈಟ್ ಅಟ್ ಫ್ರೆಡಿಸ್, ಕೊರಿಯನ್ ರಿವೆಂಜ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಡಿಮನ್ ಸಿಟಿ, ಇಂಗ್ಲಿಷ್ ಸ್ಪೋರ್ಟ್ಸ್ ಕಾಮಿಡಿ ವೆಬ್ ಸರಣಿ ರನ್ನಿಂಗ್ ಪಾಯಿಂಟ್, ಸೇರಿದಂತೆ ಟರ್ಕಿಶ್ ಕ್ರೈಮ್ ನ ಡ್ರಾಮಾ ವೆಬ್ ಸರಣಿ ಗೇವ್‌ಯಾರ್ಡ್ ಸೀಸನ್ 2 ತೆರೆಕಂಡಿವೆ. ಇನ್ನು ಫೆಬ್ರವರಿ 28 ರಂದು ಹಿಂದಿ ಕ್ರೈಮ್ ಥ್ರಿಲ್ಲರ್ ವೆಬ್ ಸರಣಿ ಡಬ್ಬಾ ಕಾರ್ಟೆಲ್, ಇಂಗ್ಲಿಷ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಕೌಂಟರ್ ಸ್ಟ್ರೈಕ್, ಇಂಗ್ಲಿಷ್ ಅನಿಮೇಷನ್ ಫ್ಯಾಮಿಲಿ ಅಡ್ವೆಂಚರ್ ಥ್ರಿಲ್ಲರ್ ಚಿತ್ರ ಪಾವು ಪೆಟ್ರೋಲ್ ದಿ ಮೈಟಿ ಮೂವಿ, ಫಿಲಿಪೈನ್ಸ್ ರೊಮ್ಯಾಂಟಿಕ್ ಕಾಮಿಡಿ ಚಿತ್ರ ಸೋಷಿಯಲ್ ಕ್ಲೈಂಬರ್ಸ್, ಎಐ ಮಾಡೆಲ್ ಐಟಾನಾ ಕುರಿತ ಸ್ಪ್ಯಾನಿಷ್ ಸಾಕ್ಷ್ಯಚಿತ್ರ ಸರಣಿ ಐತಾನಾ ಮೆಟಾಫೋರ್ಸ್ ಗಳು ತೆರೆಕಂಡಿವೆ.
ಅಮೆಜಾನ್ ಪ್ರೈಮ್ ವಿಡಿಯೋ: ಫೆಬ್ರವರಿ 28 ರಂದು ಹಿಂದಿ ಬೋಲ್ಡ್ ವೆಬ್ ಸರಣಿ ಜಿದ್ದಿ ಗರ್ಲ್ಸ್, ಕನ್ನಡದಲ್ಲಿ ಡಬ್ ಆದ ತಮಿಳು ಕ್ರೈಮ್ ಸಸ್ಪೆನ್ಸ್ ಥ್ರಿಲ್ಲರ್ ವೆಬ್ ಸರಣಿ ಸುಡಾಲ್ ದಿ ವೊರ್ಟೆಕ್ಟ್ಸ್ ಸೀಸನ್ 2, ಹಿಂದಿ ಕಾಮಿಡಿ ಚಿತ್ರ ಸೂಪರ್ ಬಾಯ್ಸ್ ಆಫ್ ಮಾಲೆಗಾಂವ್ ತೆರೆಕಂಡಿವೆ.
ಜಿಯೋ ಹಾಟ್‌ಸ್ಟಾರ್: ಫೆಬ್ರವರಿ 27 ರಂದು ಇಂಗ್ಲಿಷ್ ಹಾರರ್ ಹಾಸ್ಯ ಚಿತ್ರ ಬೀಟಲ್ ಜ್ಯೂಸ್ ಬೀಟಲ್ ಜ್ಯೂಸ್, ಕನ್ನಡದಲ್ಲಿ ಡಬ್ ಆದ ಮಲಯಾಳಂ ರೊಮ್ಯಾಂಟಿಕ್ ಕಾಮಿಡಿ ವೆಬ್ ಸರಣಿ ಲವ್ ಅಂಡರ್ ಕನ್‌ಸ್ಟ್ರಕ್ಷನ್ ತೆರೆಕಂಡರೆ, ಫೆಬ್ರವರಿ 28 ರಂದು ಇಂಗ್ಲಿಷ್ ಕಾಮಿಡಿ ಥ್ರಿಲ್ಲರ್ ದಿ ವಾಸ್ಪ್, ಕನ್ನಡ ರೊಮ್ಯಾಂಟಿಕ್ ಡ್ರಾಮಾ ಚಿತ್ರ ಕೌಸಲ್ಯಾ ಸುಪ್ರಜಾ ರಾಮ, ಇಂಗ್ಲಿಷ್ ಕಾರ್ಟೂನ್ ವೆಬ್ ಸರಣಿ ಡಿಟೆಕ್ಟಿವ್ ಕೋನನ್ ಕೇಸ್ ಕ್ಲೋಸ್ಡ್, ಇಂಗ್ಲಿಷ್ ಅನಿಮೇಷನ್ ಸರಣಿ ದಿ ಸಿಸ್ಟರ್ಸ್, ಹಿಂದಿ ಸೈನ್ಸ್ ಫಿಕ್ಷನ್ ಕಾರ್ಟೂನ್ ಅಭಿಮನ್ಯು ಕಿ ಏಲಿಯನ್ ಫ್ಯಾಮಿಲಿ, ಆಸ್ಟ್ರೇಲಿಯನ್ ಅನಿಮೇಷನ್ ಮ್ಯೂಸಿಕಲ್ ವೆಬ್ ಸರಣಿ ಕಿಟ್ಟಿ ಈಸ್ ನಾಟ್ ಎ ಕ್ಯಾಟ್, ಹಿಂದಿ ಬೋಲ್ಡ್ ವೆಬ್ ಸರಣಿ ಏಕ್ ಬದ್ನಾಮ್ ಆಶ್ರಮ ಸೀಸನ್ 3 ತೆರೆಕಂಡಿವೆ.
ಫೆಬ್ರವರಿ 27 ಹಾಗು 28 ರಂದು ಇವಿಷ್ಟು ಸಿನಿಮಾ ವೆಬ್ ಸರಣಿಗಳು ಸ್ಟ್ರೀಮಿಂಗ್ ಸೈಟ್ ಗಳಲ್ಲಿ ರಿಲೀಸ್ ಆಗಿದ್ದು ವೀಕ್ಷಿಕರನ್ನು ರಂಜಿಸಲು ಸಜ್ಜಾಗಿವೆ.