ಹೃದಯ ವಿದ್ರಾವಕ ಘಟನೆ: ವಿದ್ಯುತ್‌ ಸ್ಪರ್ಶದಿಂದ ದಂಪತಿ ದುರ್ಮರಣ

ಶಿವಮೊಗ್ಗ: ಜಿಲ್ಲೆಯ ಕಪ್ಪಗಳಲೆ ಗ್ರಾಮದಲ್ಲಿ ವಿದ್ಯುತ್‌ ಸ್ಪರ್ಶದಿಂದ ದಂಪತಿ ದುರ್ಮರಣ ಹೊಂದಿದ ದುರ್ಘಟನೆ ನಡೆದಿದೆ. ಮೃತರು ಕೃಷ್ಣಪ್ಪ (54) ಮತ್ತು ಅವರ ಪತ್ನಿ ವಿನೋದಾ (42) ಎಂದು ಗುರುತಿಸಲಾಗಿದೆ. 

ಮನೆ ಹಿಂದೆ ಒಣಗಿಸಿಟ್ಟಿದ್ದ ಬಟ್ಟೆಯನ್ನು ತೆಗೆಯಲು ಹೋದ ವೇಳೆ ವಿನೋದಾ ಅವರಿಗೆ ವಿದ್ಯುತ್ ತಗುಲಿದ್ದು, ಅವರನ್ನು ರಕ್ಷಿಸಲು ಮುಂದಾದ ಕೃಷ್ಣಪ್ಪರಿಗೂ ವಿದ್ಯುತ್‌ ಹರಿದು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು