ತಮಿಳುನಾಡು: ತಮಿಳುನಾಡಿನ ಕಡಲೂರು ಜಿಲ್ಲೆಯ ಮಾದಾಪುರಂ ಗ್ರಾಮದ ಅರ್ಜುನನ್ (50) ತಮ್ಮ ಎರಡನೇ ಮಗಳು ಅಬಿತಾ (24)ನನ್ನು ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಅಬಿತಾ ನರ್ಸಿಂಗ್ ಓದಿ, ಹತ್ತಿರದಲ್ಲೇ ಕೆಲಸಕ್ಕೆ ಸಹ ಹೋಗುತ್ತಿದ್ದಳು. ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗನನ್ನು ಬಿಟ್ಟುಬಿಡುವಂತೆ ತಂದೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಜೂನ್ 27 ರಂದು ವಾಗ್ವಾದ ಉಂಟಾಗಿ, ಕೋಪದಲ್ಲಿ ಅರ್ಜುನನ್ ಮಗಳನ್ನು ಕೊಂದಿದ್ದಾನೆ. ನಂತರ ಆತನೇ ಪೊಲೀಸರಿಗೆ ಶರಣಾಗಿದ್ದಾನೆ.