ನಟ ವಿಜಯ್ ರ್‍ಯಾಲಿ ಕಾಲ್ತುಳಿತ ದುರಂತ: ಮೃತರ ಗುರುತು ಪತ್ತೆ

ಚೆನ್ನೈ: ತಮಿಳುನಾಡಿನ ಕರೂರ್‌ನಲ್ಲಿ ನಟ ಮತ್ತು ರಾಜಕಾರಣಿ ವಿಜಯ್ ಅವರ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಸಂಭವಿಸಿದ್ದ ಭೀಕರ ಕಾಲ್ತುಳಿತ ದುರಂತದಲ್ಲಿ ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದೆ. ಸದ್ಯ, ಮೃತಪಟ್ಟವರ ಸಂಖ್ಯೆ 40ಕ್ಕೆ ಏರಿಕೆಯಾಗಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ.

ಮೃತಪಟ್ಟವರಲ್ಲಿ ಕರೂರು ಜಿಲ್ಲೆಯವರೇ ಹೆಚ್ಚು

ದುರಂತದಲ್ಲಿ ಸಾವನ್ನಪ್ಪಿದವರ ಗುರುತು ಪತ್ತೆ ಹಚ್ಚುವ ಕಾರ್ಯವು ಭರದಿಂದ ಸಾಗಿದೆ. ಮೃತಪಟ್ಟಿರುವ 40 ಜನರಲ್ಲಿ ಇಲ್ಲಿಯವರೆಗೆ 35 ಜನರ ಗುರುತು ಪತ್ತೆಯಾಗಿದೆ. ಕಾಲ್ತುಳಿತದಲ್ಲಿ ಮೃತಪಟ್ಟವರ ಜಿಲ್ಲಾವಾರು ವಿವರ ಹೀಗಿದೆ:

  • ಕರೂರು ಜಿಲ್ಲೆಯವರು: 28 ಜನರು (ಮೃತರ ಪೈಕಿ ಕರೂರು ಜಿಲ್ಲೆಯವರೇ ಹೆಚ್ಚು)

  • ಈರೋಡ್ ಜಿಲ್ಲೆ: ಇಬ್ಬರು

  • ತಿರುಪುರ ಜಿಲ್ಲೆ: ಇಬ್ಬರು

  • ಧಾರಾಪುರಂ ಜಿಲ್ಲೆ: ಇಬ್ಬರು

  • ಸೇಲಂ ಜಿಲ್ಲೆ: ಒಬ್ಬರು

ಉಳಿದವರ ಗುರುತು ಪತ್ತೆ ಕಾರ್ಯವನ್ನು ಅಧಿಕಾರಿಗಳು ಮುಂದುವರೆಸಿದ್ದಾರೆ. ಈ ಘಟನೆಯು ತಮಿಳುನಾಡು ರಾಜಕೀಯದಲ್ಲಿ ಆಘಾತ ಮೂಡಿಸಿದ್ದು, ರ್‍ಯಾಲಿಯ ಆಯೋಜನೆ ಮತ್ತು ಸಾರ್ವಜನಿಕ ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು