ಬೆಂಗಳೂರು (Bengaluru): ರೌಡಿಶೀಟರ್ ಬೆತ್ತನಗೆರೆ ಶಂಕರ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ ಕಿರಣ್ ಸೇರಿದಂತೆ ಹಲವು ರೌಡಿಶೀಟರ್‌ಗಳನ್ನು ಸಿಸಿಬಿ (CCB) ಪೊಲೀಸರು ಬಂಧಿಸಿದ್ದಾರೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ಸಂಚು ರೂಪಿಸಲಾಗಿತ್ತು ಎಂದು ತಿಳಿದುಬಂದಿದೆ.
ಹಾಡ್ಯಾಳು ದೇವೇಂದ್ರಪ್ಪ ಅಲಿಯಾಸ್ ದೇವಿ ಅವರ ಪುತ್ರನೇ ಈ ಕಾಂಗ್ರೆಸ್ ಮುಖಂಡ ಕಿರಣ್ ಆಗಿದ್ದಾನೆ. 15 ವರ್ಷಗಳ ಹಿಂದೆ ನಡೆದಿದ್ದ ಹಾಡ್ಯಾಳು ದೇವೇಂದ್ರಪ್ಪ (ದೇವಿ) ಅವರನ್ನು ಬೆತ್ತನಗೆರೆ ಶಂಕರ್ ಕೊಲೆ ಮಾಡಿದ್ದ. ತಮ್ಮ ತಂದೆಯನ್ನು ಕೊಂದಿದ್ದ ಬೆತ್ತನಗೆರೆ ಶಂಕರ್‌ನ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಪುತ್ರ ಕಿರಣ್ ಸ್ಕೆಚ್ ಹಾಕಿದ್ದ.
ಕಿರಣ್ ಜೊತೆಗೆ ತ್ಯಾಮಗೊಂಡ್ಲು ರೌಡಿಶೀಟರ್‌ಗಳಾದ ಶರತ್, ರಾಜೇಶ್ ಮತ್ತು ತಾವರೆಕೆರೆ ರೌಡಿಶೀಟರ್ ಭರತ್ ಅಲಿಯಾಸ್ ಕಾಗೆ ಸೇರಿದಂತೆ ಹಲವರು ಈ ಸಂಚಿನಲ್ಲಿ ಭಾಗಿಯಾಗಿದ್ದರು. ಆರೋಪಿಗಳ ಗುಂಪು ಶಂಕರ್‌ನ ಮನೆಯ ಬಳಿ ಮೂರ್ನಾಲ್ಕು ಬಾರಿ ರೌಂಡ್ಸ್ ಹಾಕಿ ಕೊಲೆಗೆ ಹೊಂಚು ಹಾಕುತ್ತಿತ್ತು.
ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಸಿಸಿಬಿ ಪೊಲೀಸರು ಕೊಲೆ ಸಂಚು ಕಾರ್ಯಗತಗೊಳ್ಳುವುದಕ್ಕೂ ಮುನ್ನವೇ ಕಿರಣ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ.
