ಜಾತಿ ಗಣತಿ ಎಡವಟ್ಟು: ದೇವಸ್ಥಾನದ ಗೋಡೆಗೆ ಅಂಟಿಸಿದ ಸಮೀಕ್ಷಾ ಸ್ಟಿಕ್ಕರ್!

ಬೆಂಗಳೂರು (Bengaluru): ರಾಜ್ಯಾದ್ಯಂತ ನಡೆಯುತ್ತಿರುವ ಜಾತಿ ಗಣತಿ ಸಮೀಕ್ಷೆ (Caste Survey) ಕಾರ್ಯದಲ್ಲಿ ಗಣತಿದಾರರು ದೊಡ್ಡ ಎಡವಟ್ಟು ಮಾಡಿದ್ದಾರೆ. ಬೆಂಗಳೂರಿನಲ್ಲಿ ಮನೆಯ ಬದಲು ನೇರವಾಗಿ ದೇವಸ್ಥಾನದ ಗೋಡೆಗೆ ಸಮೀಕ್ಷೆಯ ಸ್ಟಿಕ್ಕರ್ ಅಂಟಿಸಿರುವ ಘಟನೆ ವರದಿಯಾಗಿದೆ.

ಎಸ್.ಪಿ. ರಸ್ತೆಯಲ್ಲಿರುವ ವರದಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಗಣತಿದಾರರು ಸಮೀಕ್ಷೆಯ ಸ್ಟಿಕ್ಕರ್ ಅಂಟಿಸಿ ಹೋಗಿದ್ದು, ಈ ನಿರ್ಲಕ್ಷ್ಯದ ನಡೆ ಅರ್ಚಕರು ಮತ್ತು ಭಕ್ತರ ಅಚ್ಚರಿಗೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ದೇವಸ್ಥಾನದ ಅರ್ಚಕರು, "ಇದು ಸಂಪೂರ್ಣ ನಿರ್ಲಕ್ಷ್ಯ. ಬಹುಶಃ ಅವರು ದೇವರಿಗೂ ಸಮೀಕ್ಷೆ ಮಾಡಲು ಮುಂದಾಗಿದ್ದಾರೆ ಅನ್ನಿಸುತ್ತದೆ," ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯಾದ್ಯಂತ ನಡೆಯುತ್ತಿರುವ ಜಾತಿ ಗಣತಿ ಸಮೀಕ್ಷೆಯ ಗಡುವನ್ನು ಅಕ್ಟೋಬರ್ 12 ರವರೆಗೆ ವಿಸ್ತರಿಸಲಾಗಿದೆ. ರಾಜ್ಯದ ನಾಗರಿಕರು ಆನ್‌ಲೈನ್‌ನಲ್ಲಿ ಕೂಡ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯದ ಎಲ್ಲಾ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ನಿಖರವಾದ ಮಾಹಿತಿ ಸಂಗ್ರಹಿಸುವುದು ಈ ಸಮೀಕ್ಷೆಯ ಮುಖ್ಯ ಉದ್ದೇಶವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು