ಚೆನ್ನೈ (Chennai): ಮಧ್ಯಪ್ರದೇಶದಲ್ಲಿ 14 ಮತ್ತು ರಾಜಸ್ಥಾನದಲ್ಲಿ ಇಬ್ಬರು ಸೇರಿದಂತೆ ಒಟ್ಟು 16 ಮಕ್ಕಳ ಸಾವಿಗೆ ಕಾರಣವಾದ 'ಕೋಲ್ಡ್ರಿಫ್' (Coldriff) ಎಂಬ ಕೆಮ್ಮಿನ ಸಿರಪ್ ತಯಾರಿಕಾ ಕಂಪನಿಗೆ ತಮಿಳುನಾಡು ಔಷಧ ನಿಯಂತ್ರಣ ಇಲಾಖೆಯು ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಕಾಂಚೀಪುರಂ ಮೂಲದ ಸ್ರೇಸನ್ ಫಾರ್ಮಾಸ್ಯುಟಿಕಲ್ಸ್ಗೆ (SreSan Pharmaceuticals) ಈ ನೋಟಿಸ್ ನೀಡಲಾಗಿದೆ.
ತಪಾಸಣಾ ವರದಿಯಲ್ಲಿ ಉಲ್ಲಂಘನೆ ಬಹಿರಂಗ
ಔಷಧ ನಿಯಂತ್ರಣ ಇಲಾಖೆಯು ಸ್ರೇಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯಲ್ಲಿ ನಡೆಸಿದ ತಪಾಸಣೆಯ 26 ಪುಟಗಳ ವರದಿಯಲ್ಲಿ, ಸಿರಪ್ ತಯಾರಿಕೆಯಲ್ಲಿನ ಸಂಪೂರ್ಣ ಉಲ್ಲಂಘನೆಗಳು ಬಹಿರಂಗಗೊಂಡಿವೆ. ಈ ವರದಿಯ ಆಧಾರದ ಮೇಲೆ, ಇಲಾಖೆಯು ಕಂಪನಿಗೆ ವಿವರಣೆ ನೀಡುವಂತೆ ಸೂಚಿಸಿದೆ.
ಐದು ದಿನದಲ್ಲಿ ದಾಖಲೆ ನೀಡಲು ಸೂಚನೆ:
ಐದು ದಿನಗಳೊಳಗೆ ತಯಾರಿಸಿದ ಔಷಧದ ಒಟ್ಟು ಪ್ರಮಾಣ ಮತ್ತು ಇನ್ವಾಯ್ಸ್ಗಳು. ಕಚ್ಚಾ ವಸ್ತುಗಳ ವಿಶ್ಲೇಷಣಾ ಪ್ರಮಾಣಪತ್ರಗಳು (Analysis Certificates). ಪ್ರೊಪಿಲೀನ್ ಗ್ಲೈಕೋಲ್ನ (Propylene Glycol) ಖರೀದಿ ಇನ್ವಾಯ್ಸ್ ವಿವರಗಳು. ಪ್ಯಾಕಿಂಗ್ ವಸ್ತುಗಳ ಸಮಗ್ರ ವಿವರಗಳು. ಔಷಧದ ಮಾಸ್ಟರ್ ಫಾರ್ಮುಲಾ (Master Formula) ದಾಖಲೆಗಳನ್ನು
ಒದಗಿಸಲು ಸ್ರೇಸನ್ ಫಾರ್ಮಾಸ್ಯುಟಿಕಲ್ಸ್ಗೆ ನೋಟಿಸ್ ನಲ್ಲಿ ಸೂಚನೆ
ನೀಡಲಾಗಿದೆ.
ಇನ್ನು ಈ ಕಳಪೆ ಸಿರಪ್ ದುರಂತವು ದೇಶಾದ್ಯಂತ ಔಷಧ ತಯಾರಿಕಾ ಗುಣಮಟ್ಟದ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
