ಬೆಂಗಳೂರು:
ಟ್ಯಾಟೊ ಹಾಕಿಸಿಕೊಳ್ಳಬೇಕು. ಮೈ ಮೇಲೆ ಟ್ಯಾಟೊ ಇದ್ದರೆ ಚಂದ. ದೊಡ್ಡವನಾದ ಮೇಲೆ ಟ್ಯಾಟೊ ಹಾಕಿಸಿಕೊಳ್ಳಬೇಕು
ಅಥವಾ ಟ್ಯಾಟೊ ಶಾಪ್ ತೆರೆಯಬೇಕು ಎನ್ನುವ ಆಸೆ ಹೊಂದಿದವರು ಈ ಸುದ್ದಿ ಒಮ್ಮೆ ಗಮನಿಸಿ.
ದೇಶದಲ್ಲಿ
ಟ್ಯಾಟೂಗೆ ಯಾವುದೇ ನಿಯಂತ್ರಣ ಕಾನೂನುಗಳಿಲ್ಲ. ಮೊದಲ ಬಾರಿಗೆ ರಾಜ್ಯ ಸರ್ಕಾರ ಟ್ಯಾಟೂಗೆ ಹೊಸ ನಿಯಮ
ಜಾರಿಗೆ ತರಲು ಮುಂದಾಗಿದೆ. ಆರೋಗ್ಯ ಇಲಾಖೆ ಟ್ಯಾಟೊ ಹೊಸ ಕಾನೂನು ರೂಪಿಸಲು ಮುಂದಾಗಿದ್ದು, ಟ್ಯಾಟೂ
ಹಾಕುವವರಿಗೆ ಮತ್ತು ಹಾಕಿಸಿಕೊಳ್ಳವವರಿಗೆ ಇಬ್ಬರಿಗೂ ಅನ್ವಯವಾಗುವಂತೆ ಕಾನೂನು ರಚಿಸಲು ಮುಂದಾಗಿದೆ.
ಟ್ಯಾಟೂ ಹಾಕಿಸಿಕೊಳ್ಳುವರು
ಕಡ್ಡಾಯವಾಗಿ ವೈದ್ಯರಿಂದ ತಪಾಸಣೆ ಪತ್ರ ಪಡೆದಿರಬೇಕು. ಟ್ಯಾಟೂ ಹಾಕುವರು ತಾವು ಬಳಸುವ ಬಣ್ಣ, ಕ್ಯಮಿಕಲ್,
ಸೂಜಿ ಮತ್ತು ಸ್ವಚ್ಛತೆ ಕುರಿತಾಗಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಹೀಗೆ ಅನೇಕ ನಿಯಮಗಳು ಜಾರಿಯಾಗಲಿದೆ.
ಚರ್ಮ ಕ್ಯಾನ್ಸರ್, ಹೆಚ್ಐವಿ ಹಾಗೂ ಚರ್ಮ ರೋಗ, ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ ಹಾಗೂ ಸ್ಟ್ಯಾಫಿಲೋಕೊಕಸ್ ಔರೆಸ್‌ನಂತಹ ಮಾರಣಾಂತಿಕ ಸೋಂಕುಗಳು ಜನರಲ್ಲಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ತಪಾಸಣೆ ನಡೆಸಿದಾಗ ಈ ಸೋಂಕುಗಳು ಹರಡಲು ಟ್ಯೂಟೂ ಕೂಡ ಒಂದು ಕಾರಣವಾಗಿದೆ. ಹೀಗಾಗಿ, ಸರ್ಕಾರ ಹೊಸ ಕಾನೂನು ಜಾರಿಗೆ ತರಲು ಮುಂದಾಗಿದೆ.