ಇಷ್ಟುದಿನ ಕಾವೇರಿ, ಈಗ ಕೃಷ್ಣಾ

 

ಬೆಂಗಳೂರು: ರಾಜ್ಯದ ಜನ ಜಾನುವಾರುಗಳಿಗೆ ನೀರಿಲ್ಲದಿದ್ದರೂ ಇಷ್ಟು ದಿನ ಕಾವೇರಿ ನದಿ ನೀರು ತಮಿಳುನಾಡಿಗೆ ಹರಿ ಬಿಡಲಾಗುತ್ತಿತ್ತು. ಈಗ ಕೃಷ್ಣಾ ನದಿಯ ನೀರನ್ನೂ ಸಹ ಸರ್ಕಾರ ಪಕ್ಕದ ತೆಲಂಗಾಣಕ್ಕೆ ಹರಿಬಿಟ್ಟಿದೆ.

ಯಾವೂದೆ ಸರ್ಕಾರವಿರಲಿ ರಾಜ್ಯದ ಜನರ ಕುರಿತು ಕಿಂಚಿತ್ತು ಯೋಚಿಸಿದೆ ಪಕ್ಕದ ರಾಜ್ಯಗಳಿಗೆ ನಿರಂತರ ನೀರು ಹರಿಸುವುದು ಮಾತ್ರ ನಿಲ್ಲುತ್ತಿಲ್ಲ. ರಾಜ್ಯ ಸರಕಾರದ ಆದೇಶದ ಲಿಖಿತ ಪತ್ರ ವ್ಯವಹಾರವಿಲ್ಲದೇ ನಾರಾಯಣಪುರ ಜಲಾಶಯದಿಂದ ತೆಲಂಗಾಣಕ್ಕೆ ನೀರು ಬಿಡುಗಡೆ ಮಾಡಲಾಗಿದ್ದು, ಜಿಲ್ಲೆಯ ರೈತರಿಂದ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ವಿಜಯಪುರ, ಬಾಗಲಕೋಟೆ ಸೇರಿದಂತೆ ಕೃಷ್ಣಾ ನದಿ ಆಶ್ರೀರ ಪ್ರದೇಶದಲ್ಲಿ ಜನ ಜಾನುವಾರು ಕೃಷಿಗೆ ಸಾಕಷ್ಟು ನೀರಿಗೆ ಬೇಡಿಕೆಯಿದೆ. ಬೇಸಿಗೆ ಆರಂಭವಾಗಿದ್ದು ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿರುವ ಸಂದರ್ಭದಲ್ಲಿಆಲಮಟ್ಟಿ ಜಲಾಶಯದಿಂದ ತೆಲಂಗಾಣಕ್ಕೆ ನೀರು ಹರಿಸುವ ಮೂಲಕ ರಾಜ್ಯ ಸರಕಾರ ತುಘಲಕ್ಆಡಳಿತ ನಡೆಸುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯ ಸರ್ಕಾರ ‌‘ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಂದ ತೆಲಂಗಾಣಕ್ಕೆ ಒಂದೂವರೆ ಟಿಎಂಸಿ ನೀರು ಹರಿಸಲಾಗಿದೆ. ಅಲ್ಲಿನ ಕಾಂಗ್ರೆಸ್ಸರಕಾರ ಮತ್ತು ನಾಯಕರನ್ನು ತೃಪ್ತಿಪಡಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ಅವರು ಕನ್ನಡಿಗರ ಹಿತವನ್ನು ಕಡೆಗಣಿಸಿದ್ದಾರೆ ಎಂದು ಪ್ರತಿಪಕ್ಷ ಆರೋಪಿಸಿದ್ದಾರೆ.

ಕಳೆದ ಗುರುವಾರ ನಾರಾಯಣಪುರ ಜಲಾಶಯದಿಂದ ಗೂಗಲ್ಬ್ಯಾರೇಜ್ಗೆ ನೀರು ಹರಿಸಿ ಅಲ್ಲಿಂದ ತೆಲಂಗಾಣದ ಜುರಾಲಾ ಆಣೆಕಟ್ಟೆಗೆ ಹರಿದು ಹೋಗಿದೆ. ತೆಲಂಗಾಣ ರಾಜ್ಯದಲ್ಲಿ ಕುಡಿಯುವ ನೀರಿನ ಸಲುವಾಗಿ 5 ಟಿಎಂಸಿ ನೀರು ಬಿಡುವಂತೆ ಜಲಸಂಪನ್ಮೂಲ ಇಲಾಖೆಗೆ ಕೇಳಿಕೊಳ್ಳಲಾಗಿತ್ತು. ಅದರ ಭಾಗವಾಗಿ 1.27 ಟಿಎಂಸಿ ನೀರು ಹರಿಸಲಾಗಿದೆ. ಫೆಬ್ರವರಿ 20 ರಂದು 10 ಸಾವಿರ ಕ್ಯುಸೆಕ್ಸ್ನೀರು ಹರಿಸಿದ್ದರೆ, ಫೆ 21ರಿಂದ 24 ರವರೆಗೆ ಒಟ್ಟು 6000 ಕ್ಯುಸೆಕ್ಸ್ನೀರು ಹರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

2024-25ನೇ ಸಾಲಿನ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯು 2024 ನವೆಂಬರ್‌ 16 ರಂದು ನೀರಾವರಿ ಸಲಹಾ ಸಮಿತಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿನ ತೀರ್ಮಾನದಂತೆ ಹಿಂಗಾರು ಹಂಗಾಮಿಗೆ 14 ದಿನ ಚಾಲೂ ಹಾಗೂ 10 ದಿನಗಳ ಬಂದ್ಪದ್ಧತಿ ಅನುಸರಿಸಿ 2024 ಡಿಸೆಂಬರ್‌ 9 ರಿಂದ 2025 ಮಾರ್ಚ್ 23 ವರೆಗೆ ಕಾಲುವೆ ಜಾಲಕ್ಕೆ ನೀರು ಹರಿಸಲು ತೀರ್ಮಾನಿಸಿ ನೀರು ಹರಿಸಲಾಗಿದೆ.

ನಾರಾಯಣಪುರ ಜಲಾಶಯದ ನೀರು ಬಳಸಿಕೊಂಡು ಭತ್ತ ಬೆಳೆದ ರೈತರಿಗೆ ಕನಿಷ್ಠ ಏಪ್ರಿಲ್ಮೊದಲ ವಾರದವರೆಗೆ ನೀರು ಬೇಕಾಗಬಹುದೆಂದು ಹೇಳಲಾಗುತ್ತಿದೆ. ಆದರೆ ಇದೆಲ್ಲವನ್ನೂ ಗಮನಿಸಿದರೆ ಪಕ್ಕದ ತೆಲಂಗಾಣಕ್ಕೆ ಕೇಳಿದ ತಕ್ಷಣ ನೀರು ಹರಿಸಿದ್ದು, ಅಷ್ಟೊಂದು ಸಮಂಜಸವಲ್ಲಎಂಬ ಮಾತುಗಳು ಕೇಳಿ ಬಂದಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು