
ಹರಪನಹಳ್ಳಿಯ ಶಾಸಕಿ ಲತಾ ಮಲ್ಲಿಕಾರ್ಜುನ ಅವರ ಕಚೇರಿಯ ಬೀಗ ಮುರಿದು ಕಳವು ಮಾಡಲಾಗಿದೆ. ರಾತ್ರಿ ಒಂದು ಗಂಟೆಯಿಂದ ಬೆಳಗಿನ ಜಾವ 4 ಗಂಟೆ ನಡುವೆ ಕಳ್ಳತನ ನಡೆಸಲಾಗಿದೆ. ಕಳವುದಾರರು 2.5 ಲಕ್ಷ ರೂಪಾಯಿ ನಗದು, 10.80 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಕಳವು ಮಾಡಿದ್ದಾರೆ. ಪೊಲೀಸ್ ಪ್ರಕರಣವನ್ನು ದಾಖಲಾಗಿದೆ.