ವಿಜಯಪುರ: ಕನೇರಿ ಶ್ರೀಗಳ ಮನಸ್ಸಿಗೆ ನೋವುಂಟು ಮಾಡುವ ವಿದ್ಯಮಾನ ಇಲ್ಲಿಗೆ ನಿಲ್ಲಬೇಕು, ಶ್ರೀಗಳ ಬಗ್ಗೆ ಜನರು ಅಪಾರ ಅಭಿಮಾನ ಹೊಂದಿದ್ದಾರೆ, ಜನರು ಧಂಗೆ ಏಳುವ ಮುನ್ನ ಎಚ್ಚೆತ್ತುಕೊಳ್ಳಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಎಚ್ಚರಿಸಿದ್ದಾರೆ.
ಕನೇರಿ ಶ್ರೀಗಳು ಸಹಜವಾಗಿ ಮಾತನಾಡುವುದ್ದನ್ನೇ ದೊಡ್ಡದು ಮಾಡಲಾಗಿದೆ, ಅವರ ಮೇಲೆ ನಿರ್ಬಂಧ ಹೇರಿ ಕಾಂಗ್ರೆಸ್ ಸರ್ಕಾರ ಈ ವಿಷಯ ದೊಡ್ಡದು ಮಾಡಿದೆ ಎಂದರು.
ನಿತ್ಯ ನೂರಾರು ಜನರು ಅದರಲ್ಲೂ ಬಬಲೇಶ್ವರ ಭಾಗದ ಜನತೆ ನಿತ್ಯ ನನಗೆ ಫೋನಾಯಿಸಿ ಕನೇರಿ ಶ್ರೀಗಳ ಬಗ್ಗೆ ಸರ್ಕಾರ ನಡೆದುಕೊಳ್ಳುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಜನರ ಸಹನೆ ಕಟ್ಟೆಯೊಡೆಯುವ ಎಚ್ಚೆತ್ತುಕೊಳ್ಳಿ.
ಎಂ.ಬಿ. ಪಾಟೀಲರೇ ಕೈ ಸುಟ್ಟುಕೊಳ್ಳಬೇಡಿ...
ಸಚಿವ ಡಾ.ಎಂ.ಬಿ. ಪಾಟೀಲರು ಮುಖ್ಯಮಂತ್ರಿಯಾಗಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ, ಆದರೆ ತಾವು ಮುಖ್ಯಮಂತ್ರಿಯಾಗಲು ಹಿಂದೂ ಸಮಾಜವನ್ನು ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಬೇಡಿ, ಈ ಹಿಂದೆಯೂ ಲಿಂಗಾಯತ ಧರ್ಮ ಪ್ರತ್ಯೇಕ ವಿಚಾರ ವಿಷಯ ಮುನ್ನೆಲೆಗೆ ತಂದು ಕೈ ಸುಟ್ಟುಕೊಂಡಿದ್ದೀರಿ, ಈಗ ಪುನಃ ಧರ್ಮ ಒಡೆಯಲು ಹೋಗಿ ಕೈ ಸುಟ್ಟುಕೊಳ್ಳಬೇಡಿ ಎಂದು ಗುಡುಗಿದ್ದಾರೆ.
