ಬೆಂಗಳೂರು : ವಿಶ್ವ ಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿದ ಏಕೈಕ ಭಾರತೀಯ, ಅಪಾರ ಪಾಂಡಿತ್ಯ ಹೊಂದಿ ಕೆಲವೊಂದು ಬಾರಿ `ವಿವಾದ'ಗಳಿಂದಲೂ ಸುದ್ದಿಯಾಗುವ ಕಲರ್ ಫುಲ್ ಹಾಗೂ ಫವರ್‌ಫುಲ್ ರಾಜಕಾರಣಿ ಶಶಿ ತರೂರ್. ಆದರೆ ಬಹುಕಾಲದ ಕಾಂಗ್ರೆಸ್ ಪಕ್ಷದ ನಂಟು ಕಡಿತಗೊಳಿಸಿಕೊಳ್ಳುವರೇ ಎಂಬ ಅನುಮಾನ ಕೈ ವಲಯದಲ್ಲಿ ಸದ್ದು ಮಾಡುತ್ತಿದ್ದು ಕಾಂಗ್ರೆಸ್ ತೊರೆಯುವವರೇ ತರೂರ್ ಎಂಬ ಪ್ರಶ್ನೆ ಮೂಡಿಸುವಂತಾಗಿದೆ.
ಬುಧವಾರ ಬಿಡುಗಡೆಯಾಗಲಿರುವ ಇಂಡಿಯನ್ ಎಕ್ಸ್ಪ್ರೆಸ್ನ ಮಲಯಾಳಂ ಭಾಷೆಯ ಪಾಡ್ಕ್ಯಾಸ್ಟ್ ‘ವರ್ತಮಾನಂ’ ನಲ್ಲಿ ಕೇರಳದಲ್ಲಿ ಕೈ ನಾಯಕರ ಅನುಪಸ್ಥಿತಿಯನ್ನು ಪರಿಗಣಿಸಿರುವ ತರೂರ್ `ಪಕ್ಷಕ್ಕೆ ನಾನು ಬೇಡ ಎಂದರೆ ನನಗೆ ಬೇರೆ ಬೇರೆ ಆಫರ್‌ಗಳಿವೆ ಎಂಬ ಸಂದೇಶ ರವಾನಿಸಿದ್ದು ಕಾರ್ಯಕರ್ತ ವಲಯದಲ್ಲಿ ಸಂಚಲನ ಮೂಡಿಸಿವೆ.
`ಕಾಂಗ್ರೆಸ್ ಪಕ್ಷವು ಶಶಿ ತರೂರ್ ಅವರ ಸೇವೆಗಳನ್ನು ಬಯಸದಿದ್ದರೆ, ನನಗೆ ಮಾಡಲು ಬೇರೆ ಕೆಲಸಗಳಿವೆ. ರಾಜ್ಯದ ಅಭಿವೃದ್ಧಿಯ ಬಗ್ಗೆ ತಮ್ಮನ್ನು ತಾವು ವ್ಯಕ್ತಪಡಿಸುವ ಹಕ್ಕನ್ನು ಜನರು ಬೆಂಬಲಿಸಿದ್ದಾರೆ. ಪಕ್ಷ ನನ್ನನ್ನು ಬಯಸಿದರೆ ನಾನು ಪಕ್ಷಕ್ಕಾಗಿ ಇರುತ್ತೇನೆ. ಇಲ್ಲದಿದ್ದರೆ, ನನಗೆ ನನ್ನದೇ ಆದ ಕೆಲಸಗಳಿವೆ. ಸಮಯ ಕಳೆಯಲು ನನಗೆ ಯಾವುದೇ ಆಯ್ಕೆ ಇಲ್ಲ ಎಂದು ನೀವು ಭಾವಿಸಬಾರದು. ನನಗೆ ಆಯ್ಕೆಗಳಿವೆ. ನನ್ನ ಪುಸ್ತಕಗಳು, ಭಾಷಣಗಳು, ಪ್ರಪಂಚದಾದ್ಯAತ ಮಾತುಕತೆಗಾಗಿ ಆಹ್ವಾನಗಳು ನನ್ನ ಬಳಿ ಇವೆ ಎಂದು ತರೂರ್ ಸೂಚ್ಯವಾದ ಸಂದೇಶವನ್ನು ಕೈ ನಾಯಕರಿಗೆ ರವಾನಿಸಿದ್ದಾರೆ.
ಕೇರಳದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ತರೂರ್, ಕೇರಳದಲ್ಲಿ ಸಿಪಿಎಂ ನೀತಿಗಳು ಮತ್ತು ರಾಜ್ಯದ ಬೆಳವಣಿಗೆಯನ್ನು ಶ್ಲಾಘಿಸುವ ಮೂಲಕ ತಮ್ಮದೇ ಪಕ್ಷದ ಅಸಮಾಧಾನಕ್ಕೆ ಕಾರಣವಾಗಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಕ್ಕಾಗಿ ಅವರ ವಿರುದ್ಧ ಟೀಕೆಗಳು ಬಂದಿವೆ. ಇತ್ತೀಚೆಗೆ ಎಲ್‌ಡಿಎಫ್ ಸರ್ಕಾರವು ಕೇರಳ ಆರ್ಥಿಕತೆಯನ್ನು ನಿರ್ವಹಿಸುತ್ತಿರುವುದನ್ನು ಪತ್ರಿಕೆಯ ಲೇಖನದಲ್ಲಿ ಶ್ಲಾಘಿಸಿದ ನಂತರ ಕೇರಳ ಕಾಂಗ್ರೆಸ್ ವಿದ್ಯಾಮಾನಗಳು ಗರಿಗೆದರಿದ್ದವು. ಎಡಪಂಥೀಯರು ಅವರ ಹೇಳಿಕೆಗಳನ್ನು ಸ್ವಾಗತಿಸಿದರೆ, ಅವರದ್ದೇ ಪಕ್ಷದ ನಾಯಕರು ಅದರ ವಿರುದ್ಧ ಅಪಸ್ವರ ಹೊರಹಾಕಿದ್ದರು.
ಈ ಅಪಸ್ವರ ಹಾಗೂ ಅದಕ್ಕೆ ಪ್ರತಿಯಾಗಿ ತರೂರ್ ಅವರ ಪ್ರತಿಕ್ರಿಯೆ ಅವಲೋಕಿಸದಾಗ ಕಾಂಗ್ರೆಸ್ ತೊರೆಯಲು ತರೂರ್ ಸಜ್ಜಾದಂತೆ ತೋರುತ್ತಿರುವುದರಲ್ಲಿ ಎರಡು ಮಾತಿಲ್ಲ.